ನನ್ನ ಮೊದಲ ಕನ್ನಡ ಪೋಸ್ಟ್ ಬರೆದಾಗ ಏನೋ ಆನಂದ ಆಯ್ತು. ಇನ್ನಷ್ಟು ಕನ್ನಡದಲ್ಲಿ ಬರಿಬೇಕು ಅನ್ನಿಸಿತು. ಆ ಅನಿಸಿಕೆಯ ಅಭಿಪ್ರಾಯ ಈ ಬ್ಲಾಗಿಗೆ ಸ್ಪೂರ್ತಿ ಆಗಿದೆ.
ಅನಿಸಿಕೆಗಳು ಸಾಕಷ್ಟು ಇರುತ್ತವೆ. ಅವು ಕಾರ್ಯ ರೂಪಕ್ಕೆ ಬರಲು ಸ್ವಲ್ಪ ಪ್ರಯತ್ನ ಬೇಕು. ತಕ್ಕ ಸಮಯ ಬರಬೇಕು. ಅದಕ್ಕೆ ಒಂದು ರೂಪ ನೀಡಿದ ಮೇಲೆ ಅದನ್ನು ಮತ್ತಷ್ಟು ಬೆಳೆಸುವ, ಉಳಿಸುವ ಜವಾಬ್ದಾರಿ ನಮ್ಮದಾಗಿರಬೇಕು.
ಇಲ್ಲಿ ಕನ್ನಡ ಬರೆಯುವಾಗ ಎಲ್ಲೋ ಒಂದೊಂದು ಪದ ನನ್ನ ಅನಿಸಿಕೆಯನ್ನು ಯಥಾವತ್ತಾಗಿ ಬಿಂಬಿಸುತ್ತಿಲ್ಲವೇನೋ ಎಂದೆನಿಸುತ್ತದೆ. ಇದಕ್ಕೆ ನಾನು ಬಹಳ ದಿನದಗಳಿಂದ ಕನ್ನಡ ಸಾಹಿತ್ಯವನ್ನು ಓದಿಲ್ಲದಿರುವುದು ಒಂದು ಕಾರನ ಇರಬಹುದು. ನನ್ನ ಪದ ಸಂಪತ್ತು ಕುಗ್ಗಿದೆ ಅಂತಲ್ಲ (ಅದು ಯಾವತ್ತು ಹೇಳಿಕೊಲ್ಲೋಷ್ಟು ಚೆನ್ನಾಗಿತ್ತು ಅಂತನೂ ಅಲ್ಲ)ಆದರೆ ಯಾವುದನ್ನೇ ತಕ್ಕ ಮಟ್ಟಿಗೆ ಉಪಯೋಗಿಸುತ್ತ ಇದ್ದರೆ ಮಾತ್ರ...
ನನಗೆ ನನ್ನ ದ್ವಿತೀಯ ಪೆ.ಯು.ಸಿ ಕನ್ನಡ ಪೇಪರನ್ನು ಬರೆಯುವಾಗ ಒಂದು ಘಟನೆ ನೆನಪಿಗೆ ಬರುತ್ತ. ನನಗೆ "ವಾತ್ಸಲ್ಯ" ಹೇಗೆ ಬರೆಯೋದು ಅಂತ ಹೊಳಿಲೀ ಇಲ್ಲ. ಅದು ತ-ಗೆ sa -ವತ್ತೋ ಅಥವಾ ಸ-ಗೆ ತ-ವತ್ತೋ ಅಂತ ಯೋಚಿಸಿ ಕೊನೆಗೆ ಆ ಪದವನ್ನು ಬಿಟ್ಟು ಮಮತೆ ಅಂತ ಬರಿದಿದ್ದು ಆಯ್ತು. ತುಂಬ ದಿನಾ ಆಗಿತ್ತು ಕನ್ನಡ ಬರೆದು. ಪರೀಕ್ಷೆನಲ್ಲಿ ಬರಿಯುವ ಅಭ್ಯಾಸ ಮಾಡಿದ ಹಾಗೆ ಇತ್ತು. ನನಗೆ ಟೆನ್ಶನ್ ಅಗದ್ರು ಬದಲು ನಗು ಬಂದಿದ್ದು ವಿಶೇಷ.
- ಪ್ರತಿಭಾ
Subscribe to:
Post Comments (Atom)
No comments:
Post a Comment